ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕಟೀಲು: ಮಕ್ಕಳ ಯಕ್ಷ ಕಲಾಪರ್ವ ಆರಂಭ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಒಕ್ಟೋಬರ್ 18 , 2013
ಒಕ್ಟೋಬರ್ 18 , 2013

ಕಟೀಲು: ಮಕ್ಕಳ ಯಕ್ಷ ಕಲಾಪರ್ವ ಆರಂಭ

ಬಜಪೆ : ಸಮೃದ್ಧ ಕಲೆಯಾದ ಯಕ್ಷಗಾನ ತನ್ನ ವೈಶಿಷ್ಟ್ಯಗಳಿಂದಾಗಿ ವಿಶ್ವ ಮಾನ್ಯತೆ ಪಡೆದಿದೆ. ಇದೀಗ ಮಕ್ಕಳು ಕೂಡ ಹಿರಿಯರಷ್ಟೇ ಪ್ರೌಢರಾಗಿ ಯಕ್ಷಗಾನದ ಕಲಾ ಪ್ರೌಢಿಮೆ ಪ್ರಸ್ತುತಪಡಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಮತ್ತು ನಾಡಿನ ಸಂಸ್ಕೃತಿ ಉಳಿವಿಗೆ ಮಹತ್ವದ ಕಾಣಿಕೆ ಯಾಗಲಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.

ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ವಾರ್ಷಿಕ ಯಕ್ಷ ಕಲಾ ಪರ್ವವನ್ನು ಕಟೀಲು ದೇವಳದ ಸರಸ್ವತೀ ಸದನದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯಮಿ ಕಮಲಾಕ್ಷ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕಮಲಾದೇವಿ ಪ್ರಸಾದ ಅಸ್ರಣ್ಣ ಶುಭಾಶಂಸನೆ ಗೈದರು. ಕಟೀಲು ಶ್ರೀ ಡೆವಲಪರ್ಸ್‌ನ ಗಿರೀಶ್ ಶೆಟ್ಟಿ, ರಾಘವೇಂದ್ರ ಅಚಾರ್ ಬಜಪೆ ಉಪಸ್ಥಿತರಿದ್ದರು. ಮಕ್ಕಳ ಮೇಳದ ಟ್ರಸ್ಟಿಗಳಾದ ಪಶುಪತಿ ಶಾಸ್ತ್ರಿ, ದಯಾನಂದ ಮಾಡ, ರಾಜೇಶ್ ಐ, ಕೃಷ್ಣ ಕೆ. ಉಪಸ್ಥಿತರಿದ್ದರು. ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ, ದೇವಳದ ಅರ್ಚಕ ಶ್ರೀ ಹರಿನಾರಾಯಣ ದಾಸ ಅಸ್ರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭಕ್ಕೆ ಪೂರ್ವಾಭಾವಿಯಾಗಿ ದುರ್ಗಾ ಮಕ್ಕಳ ಮೇಳದ ಬಾಲ ಕಲಾವಿದರು ಯಕ್ಷಗಾನ ಪೂರ್ವರಂಗ ಪ್ರದರ್ಶನ ಪ್ರಸ್ತುತಪಡಿಸಿದರು. ಬಳಿಕ ಚಿಣ್ಣರ ಲೋಕ ಸೇವಾ ಟ್ರಸ್ಟ್ ಸಜಿಪ ಮುನ್ನೂರು ಇವರಿಂದ 'ಪಾಂಚಜನ್ಯ', ಕದಳಿ ಕಲಾ ಕೇಂದ್ರ ಕದ್ರಿ ಇವರಿಂದ 'ಕದ್ರಿ ಶ್ರೀ ಮಂಜುನಾಥ', ಫ್ರೆಂಡ್ಸ್ ಕ್ಲಬ್ ಪೆಲಾರು ಸುಳ್ಯ ಇವರಿಂದ 'ವೀರಮಣಿ ಕಾಳಗ' ಯಕ್ಷಗಾನ ಪ್ರದರ್ಶನಗೊಂಡಿತು.

ಕಲಾ ಪರ್ವದಲ್ಲಿ 13 ಮಕ್ಕಳ ಮೇಳಗಳು ಪಾಲ್ಗೊಂಡಿವೆ. ಅ. 20ರಂದು ಸಂಜೆ 6 ರಿಂದ ಕಟೀಲು ರಥಬೀದಿಯಲ್ಲಿ ಸಮಾರೋಪ, ಸನ್ಮಾನ, ಗುರುವಂದನೆ, ಪ್ರಮಾಣ ಪತ್ರ ಪ್ರದಾನ, ಪ್ರತಿಭಾ ಪುರಸ್ಕಾರಗಳು ಜರಗಲಿವೆ ಎಂದು ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಹರಿನಾರಾಯಣದಾಸ ಅಸ್ರಣ್ಣ ತಿಳಿಸಿದ್ದಾರೆ.

ಕೃಪೆ : http://vijaykarnataka.indiatimes.com/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ